Index   ವಚನ - 166    Search  
 
ಎನ್ನ ಮಾಟ, ಕುರುಡ ಸಭೆಯಲ್ಲಿರ್ದು ನಗೆನಕ್ಕಂತಾಯಿತ್ತು. ಶ್ರೋತ್ರನಾಶದಲ್ಲಿ ಜಯಸ್ವರದ ಪಾಡಿದಂತಾಯಿತ್ತು. ಬೆಳ್ಳ, ಹಣ್ಣಿಂಗೆ ತಾಳಿದ ದೃಷ್ಟದಂತಾಯಿತ್ತು. ನಾ ಬಂದ ಲೀಲೆಯನಿನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.