Index   ವಚನ - 199    Search  
 
ಕಂಬಳಿಯಲ್ಲಿ ಕೂಳ ಕಟ್ಟಿ, ಕೂದಲ ಸೋದಿಸಬಹುದೆ ಅಯ್ಯಾ ? ಸಂಸಾರಕ್ಕಂಗವನಿತ್ತು, ಮೋಹಕ್ಕೆ ಮನವವಿತ್ತು, ಮನುಜರ ಗುಣ ತಮಗೊಂದೂ ಬಿಡದೆ, ಘನವನರಿತೆಹೆನೆಂಬ ಬಿನುಗಾಟದ ಮಾತೇಕೆ ? ಹಸಿವು ತೃಷೆ ವ್ಯಸನ ವ್ಯಾಪ್ತಿ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಯವಾಗುತ್ತಿರ್ದು, ದ್ವೈತಾದ್ವೈತದ ಮಾತಿನ ಬಣಬೆಯ ವೇಷಗಳ್ಳಗೇಕೆ ಪರದೇಶಿಗನ ಸುದ್ದಿ? ಅರಿದವನ ಅಂಗ ದಗ್ಧಪಟದಂತೆ, ಬೆಂದ ನುಲಿಯಂತೆ, ಬೆಳಗಿನ ರೂಪಿನಂತೆ, ಉದಕದ ಪ್ರತಿಬಿಂಬದಂತೆ, ಅದು ತೋರಲಿಲ್ಲವಾಗಿ, ಅದು ಅಂಗಲಿಂಗಪ್ರಾಣಸಂಯೋಗ, ನಿಃಕಳಂಕ ಮಲ್ಲಿಕಾರ್ಜುನಾ.