ಕಕ್ಷೆ, ಕರಸ್ಥಲ, ಉತ್ತಮಾಂಗ, ಉರಸೆಜ್ಜೆ, ಮುಖಸೆಜ್ಜೆ, ಅಮಳೋಕ್ಯ,
ಇಂತೀ ಷಟ್‍ಸ್ಥಾನ ಲಿಂಗಸಂಬಂಧವೆಂಬ
ಅಂಗಹೀನರ ಮುಖವ ನೋಡಲಾಗದು.
ಉಂಗುಷ್ಠದಲ್ಲಿ ಸರ್ಪ ದಷ್ಟವಾದಡೆ, ದೇಹವೆಲ್ಲ ತದ್ವಿಷವಾದ ತೆರೆದಂತೆ,
ಆ ತೆರ ಸರ್ವಾಂಗಲಿಂಗಿಗೆ ಉಂಟಿಲ್ಲವೆಂಬುದ ನೀವೆ ಬಲ್ಲಿರಿ.
ಇದು ಕಾರಣ, ವಿಷಕ್ಕೆ ಸ್ಥಾಪ್ಯವಿಲ್ಲ,
ಸರ್ವಾಂಗಲಿಂಗಿಗೆ ಷಟ್‍ಸ್ಥಾನವಿಲ್ಲ.
ಇಂತೀ ವ್ಯರ್ಥರು ಕೆಟ್ಟ ಕೇಡ ನೋಡಿ ದೃಷ್ಟವಾಗಿ,
ಎನಗೆ ನಾಚಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Kakṣe, karasthala, uttamāṅga, urasejje, mukhasejje, amaḷōkya,
intī ṣaṭsthāna liṅgasambandhavemba
aṅgahīnara mukhava nōḍalāgadu.
Uṅguṣṭhadalli sarpa daṣṭavādaḍe, dēhavella tadviṣavāda teredante,
ā tera sarvāṅgaliṅgige uṇṭillavembuda nīve balliri.
Idu kāraṇa, viṣakke sthāpyavilla,
sarvāṅgaliṅgige ṣaṭsthānavilla.
Intī vyartharu keṭṭa kēḍa nōḍi dr̥ṣṭavāgi,
enage nācikeyāyittu, niḥkaḷaṅka mallikārjunā.