Index   ವಚನ - 231    Search  
 
ಕಾಡೆಮ್ಮೆಯ ಹಾಲ, ಊರ ಕೋಣ ಕುಡಿದು, ಮತ್ತಾರನೂ ಲೆಕ್ಕಿಸದೆ, ಬಹುಜನರ ನೋಯಿಸಿ ಬರುವಲ್ಲಿ, ಒಂದಾಡಿನ ಬಾಲದ ಹೊಯ್ಲಿಗಂಜಿ ಓಡಿಹೋಯಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಭೇದಿಸಲರಿಯದೆ.