Index   ವಚನ - 247    Search  
 
ಕಾಯಸೂತಕಿಗಳು ಗುರುವನರಿಯರಾಗಿ, ಭಾವಸೂತಕಿಗಳು ಲಿಂಗವನರಿಯರಾಗಿ, ತ್ರಿವಿಧಸೂತಕಿಗಳು ಜಂಗಮವನರಿಯರಾಗಿ, ತನುಶುದ್ಧವಾಗಿ ಗುರುವನರಿಯಬೇಕು. ಮನಶುದ್ಧವಾಗಿ ಲಿಂಗವನರಿಯಬೇಕು. ತ್ರಿವಿಧ ಮಲಶುದ್ಧವಾಗಿ ಜಂಗಮವನರಿಯಬೇಕು. ಇಂತೀ ಸ್ಥಲ ಕುಳಂಗಳ ಭಾವಿಸಿ, ತನುಮನಧನ ನಿರತನಾಗಿ, ತ್ರಿವಿಧಕ್ಕೆ ತ್ರಿವಿಧವನಿತ್ತು, ತ್ರಿವಿಧಾಂಗ ಭರಿತನಾಗಿಪ್ಪ ನಿಜಲಿಂಗಾಂಗಿಗೆ ಇಹ ಪರವೆಂಬ ಉಭಯವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.