Index   ವಚನ - 288    Search  
 
ಕೋಡಗದಣಲಿನಲ್ಲಿ ಮೂರಗುಳ ಕಂಡೆ. ಒಂದಗುಳು ಚಪ್ಪೆಗಲ್ಲಿನಂದ, ಒಂದಗುಳು ಅಡ್ಡಗಲ್ಲಿನಂದ, ಒಂದಗುಳು ಊರ್ಧ್ವಗಲ್ಲಾಗಿ ನಿಂದಿಹುದು. ಆ ಕಲ್ಲಿನ ತುದಿಯಲ್ಲಿ ನಿಂದು ಕೋಡಗವ ಕೊಂದೆ. ಚಪ್ಪೆಗಲ್ಲನಪ್ಪಳಿಸಿದೆ, ಅಡ್ಡಗಲ್ಲನಡ್ಡಿಗೆಯನಿಕ್ಕಿ ಒಡೆದೆ. ನಿಂದ ಕಲ್ಲ ಸಂದೇಹವಿಲ್ಲದೆ ತಳ್ಳಿದೆ. ಅದರಂದವ ತಿಳಿ, ಲಿಂಗೈಕ್ಯನಾದಡೆ ಹೊಂದದ ಬಟ್ಟೆಯೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.