ಗುರುಜಂಗಮದ ಪಾದೋದಕವ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ,
ಆ ಲಿಂಗ ಮೊದಲೋ, ಗುರುಚರ ಮೊದಲೋ ?
ಅನಾದಿಬೀಜ ಲಿಂಗ, ಆದಿಬೀಜ ಗುರುಚರ.
ಇಂತೀ ಉಭಯವನರಿತಲ್ಲಿ,
ಗುರುಚರಕ್ಕೆ ಲಿಂಗವೆ ಆದಿ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Gurujaṅgamada pādōdakava liṅgakke majjanava māḍuvalli,
ā liṅga modalō, gurucara modalō?
Anādibīja liṅga, ādibīja gurucara.
Intī ubhayavanaritalli,
gurucarakke liṅgave ādi, niḥkaḷaṅka mallikārjunā.