Index   ವಚನ - 306    Search  
 
ಗುರುಪೂಜಕರೆಲ್ಲರೂ ಬ್ರಹ್ಮನ ಪಾಶಕ್ಕೊಳಗಾದರು. ಲಿಂಗಪೂಜಕರೆಲ್ಲರೂ ವಿಷ್ಣುವಿನ ಪಾಶಕ್ಕೊಳಗಾದರು. ಜಂಗಮಪೂಜಕರೆಲ್ಲರೂ ರುದ್ರನ ಪಾಶಕ್ಕೊಳಗಾದರು. ಇಂತೀ ಮೂವರ ಹಂಗಿಗೆ ಸಿಲ್ಕಿ ಜ್ಞಾನಿಗಳೆಂತಾದಿರಯ್ಯಾ ? ಮುಟ್ಟಿ ಪೂಜಿಸುವದಕ್ಕೆ ರೂಪಿಲ್ಲದ ಲಿಂಗದ ದೃಷ್ಟವ ಕಂಡ ಪರಿಯಿನ್ನೆಂತೊ ? ಇದು ಮರ್ತ್ಯದಲ್ಲಿ ಮಾಡುವ ಅಭ್ಯಾಸವಲ್ಲದೆ ನಿಜವಲ್ಲ. ಅನಿತ್ಯವ ಬಿಟ್ಟ ನಿಜನಿಶ್ಟಯಂಗಲ್ಲದೆ, ಸುಚಿತ್ತ ನಿರ್ಮುಕ್ತ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಐಕ್ಯನಲ್ಲ.