Index   ವಚನ - 329    Search  
 
ಗೂಳಿಯ ಕೋಡಿನಲ್ಲಿ ನಾಡೆಲ್ಲ ಸಿಕ್ಕಿತ್ತು. ಗೂಳಿಯ ಕೊಲಬಾರದು, ನಾಡು ಕಾಡ ಕೂಡಿತ್ತು. ಈ ರೂಢಿಯೊಳಗಣ ಹೊಲನ ಮೇದು, ಆಡ ಬಂದೆಯೋ ? ಕಾಡಿನ ನಾಡ ಬಿಟ್ಟು ರೂಢಿಯ ಮೋಹ ಬಿಡಬೇಡ. ನಿನ್ನ ಬೇಡಿಕೊಂಬೆ, ನಿಃಕಳಂಕ ಮಲ್ಲಿಕಾರ್ಜುನಾ.