Index   ವಚನ - 420    Search  
 
ಧರೆಯ ಮೇಲಣ ಮರದಲ್ಲಿ, ಹಿರಿದಿಹ ಕೊಂಬಿನ ತುದಿಯಲ್ಲಿ, ಅರಿಬಿರಿದಿನ ಪಕ್ಷಿ ಬಂದಿತ್ತು ನೋಡಾ. ಆ ಪಕ್ಷಿಯ ವರ್ಣ, ಹಾರುವ ರಟ್ಟೆ ಕೆಂಪು, ತೋರಿಹ ರಟ್ಟೆ ಕಪ್ಪು. ಮೀರಿಹ ರಟ್ಟೆಯ ತುಟ್ಟತುದಿಯಲ್ಲಿ ನಾನಾ ವರ್ಣದ ಬಣ್ಣ. ಆ ಹಕ್ಕಿಯ ಗಳದಲ್ಲಿ ಹೇಮವರ್ಣ, ಆ ಹಕ್ಕಿಯ ತುದಿಯಲ್ಲಿ ಧವಳವರ್ಣ. ಆ ಹಕ್ಕಿಯ ಹಾರುವ ರಟ್ಟೆಯ ಕಳೆದು, ತೋರಿಹ ರಟ್ಟೆಯ ಮುರಿದು, ಮೀರಿಹ ರಟ್ಟೆಯ ಬೆಂದು, ಕೊರಳಿನ ಹಳದಿ ಹಾರಿ, ಕೊಕ್ಕಿನ ಬೆಳ್ಪು ನಿಃಪತಿಯಾಗಿ, ನಿಃಕಳಂಕ ಮಲ್ಲಿಕಾರ್ಜುನ ಸತ್ತನೊ.