Index   ವಚನ - 434    Search  
 
ನಾನಾ ಸಾರಂಗಳ ಸವಿಯ, ಆ ಸಾರ ಅರಿಯಬಲ್ಲುದೇ, ಸವಿಸಾರವ ಬಲ್ಲವನಲ್ಲದೆ ? ನಾನಾ ಘಟಪಟವ ಆ ಘಟಪಟಂಗಳು ಬಲ್ಲವೆ, ಇದಿರಿಟ್ಟವಲ್ಲದೆ ? ತಾ ನೋಡುವಲ್ಲಿ ನಾನಾ ಛಾಯಂಗಳು ದರ್ಪಣದಲ್ಲಿ ಒಪ್ಪುವಂತೆ, ಆ ದರ್ಪಣಕ್ಕೆ ತನ್ನ ಮುಖಕ್ಕೆ ದೃಷ್ಟವುಂಟೆ ? ಆ ನೆನಹಿಂಗೆ ಇಷ್ಟ, ಆ ಇಷ್ಟಕ್ಕೆ ಈ ಗುಣದೃಷ್ಟ. ಇಂತೀ ಪ್ರಾಣಲಿಂಗಿಯ ಕೂಟ, ಮೇಲೆ ಐಕ್ಯಾನುಭಾವಿಯ ಲೇಪ, ನಿಃಕಳಂಕ ಮಲ್ಲಿಕಾರ್ಜುನಲಿಂಗದೊಳಗಿನಾಟ.