ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ.
ನಿನಗೆ ಪೂಜೆಯ ಮಾಡುವಲ್ಲಿ,
ನಾ ಕರ್ಮಜೀವಿ, ನೀ ಪುಣ್ಯಜೀವಿ.
ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ.
ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ.
ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ.
ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು.
ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ.
ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ,
ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು,
ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ,
ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ.
ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ninage majjanava māḍuvalli, nā maladēhi, nī nirmaladēhi.
Ninage pūjeya māḍuvalli,
nā karmajīvi, nī puṇyajīvi.
Ninage gandhava hūsuvalli, nā durguṇa jīvi, nī sugandha bhāvi.
Ninage akṣateyanikkuvalli, nā lakṣita, nī alakṣita.
Ninage dhūpavanikkuvalli, nā bhāvita, nī nirbhāvita.
Ninage dīpavanettuvalli, nā jyōti, nī beḷagu.
Intī bhāvaṅgaḷalli bhāvisi kaṇḍ'̔ehenendaḍe, bhāvakke agōcaranāgippe.
Ninnanarivudakke teranāvudendaḍe, guruviṅge tanu, ninage mana,
jaṅgamakke dhana, trividhakke trividhavanittu,
dagdhapaṭadante rūpige hoddigeyāgi,
kallige hoddadippa liṅga sadbhaktana sthala.
Ā bhaktanalli tappadippe, niḥkaḷaṅka mallikārjunā.