Index   ವಚನ - 453    Search  
 
ನಿಷ್ಠೆಯ ಹರಿದು ಭಕ್ತಿಯೆಂಬ ತೂರ್ಯದಲ್ಲಿ ಸಿಲ್ಕಿ ಸಾಯದೆ, ವಿರಕ್ತಿಯಿಂದ ಕರಿಗೊಂಡು ಮಾಡುವ ಸದಾನಂದನ ಇರವು ಹೇಂಗಿರಬೇಕೆಂದಡೆ: ಬಂದುದನೊಲ್ಲೆನ್ನದೆ, ಬಾರದುದಕ್ಕೆ ಬಯಸದೆ, ಮಾಟದಲ್ಲಿ ಮನ ಸಂದೇಹಿಸದೆ, ಜಗದಲ್ಲಿ ಸುಳಿವ ಆಟದವರ ನೋಡುತ್ತ, ಉಣಬಂದವರಿಗಿಕ್ಕಿ, ಬೇಡ ಬಂದವರಿಗೆ ಕೊಟ್ಟು, ಆರೂಢರನರಿದು ಶೋಧಿಸಿ ಮಾಡುವುದು. ನಿಷ್ಪತ್ತಿ ನಿರವಯ ಭಕ್ತನ ಯುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ.