Index   ವಚನ - 470    Search  
 
ಪಂಚಭೌತಿಕದಿಂದ ಬಂದ ತನುವಿನಲ್ಲಿ, ಪಂಚಮುಖವನರಿವುದೆ ದೃಷ್ಟ. ಸಂಚಿತವ ಹರಿದ ವಸ್ತುವನರಿವುದಕ್ಕೆ, ಸಂಚಾರ ಹಿಂಗಿ ಅರಿವುದೆ ದೃಷ್ಟ. ಈ ಉಭಯಸಂಚವನರಿದು ಮುಂಚಬಲ್ಲಡೆ, ಆತನೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.