Index   ವಚನ - 480    Search  
 
ಪಾದೋದಕ ಮಂಡೆಗೆ ಮಜ್ಜನ, ಪ್ರಸಾದೋದಕ ಜಿಹ್ವೆಗೆ ಭಾಜನ. ಲಿಂಗೋದಕ ಅಂಗಕ್ಕೆ ಲೇಪನ. ಈ ಮೂರು ಮುನ್ನಿನ ಅನಾದಿಯ ಲಿಂಗ ಸೋಂಕು. ಆದಿಯಿಂದತ್ತ ನೀವೆ ಬಲ್ಲಿರಿ, ನಾನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.