Index   ವಚನ - 522    Search  
 
ಬಲ್ಲವರಾದಡೆ ಗೆಲ್ಲಸೋಲಕ್ಕೆ ಹೋರಲೇಕಯ್ಯಾ ? ಮಹದಲ್ಲಿ ಅನುವನರಿದವಂಗೆ ಹೋರಟೆಯೇಕಯ್ಯಾ ? ಗೆಲ್ಲಗೂಳಿತನವಲ್ಲದೆ ಬಲ್ಲವರೆಂತಾದಿರಣ್ಣಾ ? ಅರಕೆಗೊಂಡವನೊಡಲು ನಂದಿಸಿದಡೀ ಪದ, ಕೊನೆಯ ಮೊನೆಯಂತೆ, ಶಿಶು ಕಂಡ ಕನಸಿನಂತೆ, ಪಶುವಿನ ಉದರದಲ್ಲಿ ಸೋಂಕಿದ ಶತವ್ಯಾಧಿಯಂತೆ, ಇದು ಲಿಂಗೈಕ್ಯವು. ಮುಟ್ಟಲಿಲ್ಲವಾಗಿ ಒಡಲಿಲ್ಲ, ಒಡಲಿಲ್ಲವಾಗಿ ನೀನೆನಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನ ತಾನೆಯಾಗಿ.