ಬಲ್ಲವರೆಂದು ಎಲ್ಲಕ್ಕೂ ಹೇಳಿ,
ಅಲ್ಲಿ ಎಲ್ಲಿಯೂ ಬೋಧಿಸಬಲ್ಲವ
ನಾನೆಂದು ನುಡಿವ ಕಲ್ಲೆದೆಯವನೆ ಕೇಳಾ.
ಲಿಂಗವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ?
ಜಂಗಮವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ?
ಪ್ರಸಾದವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ?
ಸಾಮ್ಯಸಂಬಂಧಕ್ಕೆ ಕರ್ತೃಭೃತ್ಯತ್ವವಲ್ಲದೆ,
ಜ್ಞಾನಾತೀತಂಗೆ ಸಾಮ್ಯಸಂಬಂಧವ ಭಾವಿಸಲಿಲ್ಲ.
ಇಕ್ಕಿದ ಕರುವಿಂಗೆ ಲೆಪ್ಪಣವಲ್ಲದೆ, ಮನಸ್ಸಿನಲ್ಲಿ ಒಪ್ಪವುಂಟೆ ಅಯ್ಯಾ ?
ಇದು ತಪ್ಪದು.
ಕ್ರಿಯಾನಿರತವಾದ ಭಕ್ತಂಗೆ ನಮೋ ನಮೋ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ballavarendu ellakkū hēḷi,
alli elliyū bōdhisaballava
nānendu nuḍiva kalledeyavane kēḷā.
Liṅgava kuritalli oḷḷittu, hollehavuṇṭe?
Jaṅgamava kuritalli oḷḷittu, hollehavuṇṭe?
Prasādava kuritalli oḷḷittu, hollehavuṇṭe?
Sāmyasambandhakke kartr̥bhr̥tyatvavallade,
jñānātītaṅge sāmyasambandhava bhāvisalilla.
Ikkida karuviṅge leppaṇavallade, manas'sinalli oppavuṇṭe ayyā?
Idu tappadu.
Kriyāniratavāda bhaktaṅge namō namō,
niḥkaḷaṅka mallikārjunā.