Index   ವಚನ - 523    Search  
 
ಬಲ್ಲವರೆಂದು ಎಲ್ಲಕ್ಕೂ ಹೇಳಿ, ಅಲ್ಲಿ ಎಲ್ಲಿಯೂ ಬೋಧಿಸಬಲ್ಲವ ನಾನೆಂದು ನುಡಿವ ಕಲ್ಲೆದೆಯವನೆ ಕೇಳಾ. ಲಿಂಗವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಜಂಗಮವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಪ್ರಸಾದವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಸಾಮ್ಯಸಂಬಂಧಕ್ಕೆ ಕರ್ತೃಭೃತ್ಯತ್ವವಲ್ಲದೆ, ಜ್ಞಾನಾತೀತಂಗೆ ಸಾಮ್ಯಸಂಬಂಧವ ಭಾವಿಸಲಿಲ್ಲ. ಇಕ್ಕಿದ ಕರುವಿಂಗೆ ಲೆಪ್ಪಣವಲ್ಲದೆ, ಮನಸ್ಸಿನಲ್ಲಿ ಒಪ್ಪವುಂಟೆ ಅಯ್ಯಾ ? ಇದು ತಪ್ಪದು. ಕ್ರಿಯಾನಿರತವಾದ ಭಕ್ತಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.