ಬಲ್ಲವರಾದಡೆ ಗೆಲ್ಲಸೋಲಕ್ಕೆ ಹೋರಲೇಕಯ್ಯಾ ?
ಮಹದಲ್ಲಿ ಅನುವನರಿದವಂಗೆ ಹೋರಟೆಯೇಕಯ್ಯಾ ?
ಗೆಲ್ಲಗೂಳಿತನವಲ್ಲದೆ ಬಲ್ಲವರೆಂತಾದಿರಣ್ಣಾ ?
ಅರಕೆಗೊಂಡವನೊಡಲು ನಂದಿಸಿದಡೀ ಪದ,
ಕೊನೆಯ ಮೊನೆಯಂತೆ, ಶಿಶು ಕಂಡ ಕನಸಿನಂತೆ,
ಪಶುವಿನ ಉದರದಲ್ಲಿ ಸೋಂಕಿದ ಶತವ್ಯಾಧಿಯಂತೆ,
ಇದು ಲಿಂಗೈಕ್ಯವು.
ಮುಟ್ಟಲಿಲ್ಲವಾಗಿ ಒಡಲಿಲ್ಲ, ಒಡಲಿಲ್ಲವಾಗಿ ನೀನೆನಲಿಲ್ಲ,
ನಿಃಕಳಂಕ ಮಲ್ಲಿಕಾರ್ಜುನ ತಾನೆಯಾಗಿ.
Art
Manuscript
Music
Courtesy:
Transliteration
Ballavarādaḍe gellasōlakke hōralēkayyā?
Mahadalli anuvanaridavaṅge hōraṭeyēkayyā?
Gellagūḷitanavallade ballavarentādiraṇṇā?
Arakegoṇḍavanoḍalu nandisidaḍī pada,
koneya moneyante, śiśu kaṇḍa kanasinante,
paśuvina udaradalli sōṅkida śatavyādhiyante,
idu liṅgaikyavu.
Muṭṭalillavāgi oḍalilla, oḍalillavāgi nīnenalilla,
niḥkaḷaṅka mallikārjuna tāneyāgi.