Index   ವಚನ - 524    Search  
 
ಬಲುಗೈಯನೊಡನೆ ಹಗೆವಡೆದು ಕೊಲೆಗಂಜಲೇಕೆ ? ಭವಸಾಗರದ ಬಲೆಗೆ ಸಿಕ್ಕಿ, ನಿರ್ಗುಣದ ಒಲುಮೆಯ ಮಾತ ನಟಿಸಲೇಕೆ ? ತ್ರಾಸಿಂಗೆ ಒಲವರವುಂಟೆ? ಭಾಷೆಗೆ ನುಡಿ ಎರಡುಂಟೆ ? ಪರಮೇಶ್ವರನನರಿದವಂಗೆ ಜಗದಾಸೆಯ ಮುಖವಿಲ್ಲವೆಂದೆ. ಅವ ಈಷಣತ್ರಯಕ್ಕೆ ಹೊರಗೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.