Index   ವಚನ - 533    Search  
 
ಬೀಜದ ಮೊಳೆಯ ಮುರಿದ ಮತ್ತೆ, ಅದು ಸಾಗಬಲ್ಲುದೆ? ಸುನಾದದ ಭೇದವನರಿದ ಮತ್ತೆ, ಅದು ವೇಧಿಸಬಲ್ಲುದೆ? ಆದಿಯವರೆಲ್ಲರೂ ಹೋದರು ಹೊಲಬುಗೆಟ್ಟು. ಎನಗಿನ್ನಾದವರಾರೋ, ಭೇದಕ್ಕತೀತ, ಚೋದ್ಯಮಯ ನಿಃಕಳಂಕ ಮಲ್ಲಿಕಾರ್ಜುನಾ ?