Index   ವಚನ - 535    Search  
 
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ ? ರತ್ನದೊಳಗಣ ಉರಿ ಹೊತ್ತಬಲ್ಲುದೆ ? ಭಿತ್ತಿಯ ಮೇಲಣ ಚಿತ್ರ ಬಟ್ಟೆಯಲ್ಲಿ ನಡೆಯಬಲ್ಲುದೆ ? ಇದರಚ್ಚುಗವ ಕಂಡು ಮತ್ತೆ ಹಿರಿಯರೆಂದಡೆ, ಅದೆತ್ತಣ ಭೀತಿ ಎನಗೆ, ನಿಃಕಳಂಕ ಮಲ್ಲಿಕಾರ್ಜುನಾ ?