Index   ವಚನ - 542    Search  
 
ಬೆಳಗಿಂಗೆ ಬೆಳಗಿನಿತ್ತಡೆ ನೋಡಬಲ್ಲವರಾರು ? ಸವಿಗೆ ಸ್ವಾದವನಿತ್ತಡೆ ರುಚಿಸಬಲ್ಲವರಾರು ? ಜ್ಞಾನಕ್ಕೆ ಜ್ಞಾನವ ಹೇಳಿದಡೆ ಕೇಳಬಲ್ಲವರಾರು ? ಕರ್ತ ನೀನಾಗಿ, ಭೃತ್ಯ ನಾನಾಗಿ ಇದರಚ್ಚುಗವ ಬಿಡಿಸಾ, ನಿಃಕಳಂಕ ಮಲ್ಲಿಕಾರ್ಜುನಾ.