Index   ವಚನ - 543    Search  
 
ಬೆಳಗಿನಲ್ಲಿದ್ದು ಬೆಳಗ ಕಾಬುದು ತಾನೊ, ಇದಿರೊ ? ಇಷ್ಟದ ಮರೆಯಲ್ಲಿರ್ದ ದೃಷ್ಟವ ಕಂಡೆಹೆನೆಂದಡೆ, ಕಾಬುದು, ಕಾಣಿಸಿಕೊಂಬುದು ಅದನೇನೆಂದರಿಯಬೇಕು. ಅರಿದಲ್ಲದೆ ಇಷ್ಟ ಪ್ರಾಣ ಸಮರ್ಪಣವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.