Index   ವಚನ - 544    Search  
 
ಬೇಟದಲ್ಲಿ ಸುಖಿಯಾದ ಮತ್ತೆ ಕೂಟದ ಆಟವೇಕೆ ? ಜಂಗಮದಲ್ಲಿ ಕೂಟ ಕೂಡಿದ ಮತ್ತೆ, ವಸ್ತುವಿನಲ್ಲಿ ಕೂಡಿಹೆನೆಂಬ ಆತುರವೇಕೆ ? ನಿತ್ಯಸುಖಿಯಾದ ಮತ್ತೆ ಒಚ್ಚೊತ್ತಿಗೊಂದು ಪರಿಯಾಗಲೇಕೊ ? ಈ ಸಚ್ಚಿದಾನಂದನವರಿದಡೆ, ಭಕ್ತಿ ಮುಕ್ತಿಗೆ ದೂರ, ನಿಃಕಳಂಕ ಮಲ್ಲಿಕಾರ್ಜುನಾ.