ಬೇಟದಲ್ಲಿ ಸುಖಿಯಾದ ಮತ್ತೆ ಕೂಟದ ಆಟವೇಕೆ ?
ಜಂಗಮದಲ್ಲಿ ಕೂಟ ಕೂಡಿದ ಮತ್ತೆ,
ವಸ್ತುವಿನಲ್ಲಿ ಕೂಡಿಹೆನೆಂಬ ಆತುರವೇಕೆ ?
ನಿತ್ಯಸುಖಿಯಾದ ಮತ್ತೆ ಒಚ್ಚೊತ್ತಿಗೊಂದು ಪರಿಯಾಗಲೇಕೊ ?
ಈ ಸಚ್ಚಿದಾನಂದನವರಿದಡೆ, ಭಕ್ತಿ ಮುಕ್ತಿಗೆ ದೂರ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bēṭadalli sukhiyāda matte kūṭada āṭavēke?
Jaṅgamadalli kūṭa kūḍida matte,
vastuvinalli kūḍ'̔ihenemba āturavēke?
Nityasukhiyāda matte occottigondu pariyāgalēko?
Ī saccidānandanavaridaḍe, bhakti muktige dūra,
niḥkaḷaṅka mallikārjunā.