Index   ವಚನ - 545    Search  
 
ಬೇಡ ಬಿಲ್ಲ ಹಿಡಿದು, ರೂಢಿಯಲ್ಲಿ ತಿರುಗಾಡುತ್ತಿರಲಾಗಿ, ಬೇಡನ ಬಿಲ್ಲ ಬೇಡಿ ಕಾಡಿಹರೆಲ್ಲರು. ಆ ಬಿಲ್ಲು ರೂಢಿಯದಲ್ಲ, ಇನ್ನಾರು ಕೊಟ್ಟರೊ. ಕೊಟ್ಟವರ ಕೊಂಡು, ಕೊಡದವರ ಹಿಂಗಿ, ಬಟ್ಟೆಯ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.