Index   ವಚನ - 548    Search  
 
ಬ್ರಹ್ಮನ ಉತ್ಪತ್ಯವ ಕಳೆದಲ್ಲದೆ ಲಿಂಗಕ್ಕೆ ಮಜ್ಜನವೆರೆಯಲಾಗದು. ವಿಷ್ಣುವಿನ ಸ್ಥಿತಿಯನರಿದಲ್ಲದೆ ಲಿಂಗಕ್ಕೆ ನೈವೇದ್ಯವ ತೋರಲಾಗದು. ರುದ್ರನ ಲಯವ ಹಿಂಗಿಯಲ್ಲದೆ ಲಿಂಗಸಂಗಿಯಾಗಬಾರದು. ಮಾತಿನ ಗೆಲ್ಲಸೋಲಕ್ಕೆ ಹಿರಿಯರಾದಿರಲ್ಲದೆ ಬಲ್ಲವರಾದುದಿಲ್ಲ. ಭಕ್ತರೆಂಬವರು ಉಂಟು, ಇಲ್ಲವೆಂಬ ಸಂದೇಹದಲ್ಲಿ ಸಂಕಲ್ಪಜೀವಿಗಳಾದರು. ಇಂತೀ ದ್ವಯದ ಅವಧಿಯನರಿಯದೆ ಭಕ್ತರೆಂತಾದಿರಪ್ಪಾ. ಇಂತೀ ಉಭಯದ ತೆರನನರಿಯದ ಜಂಗಮವೆಂತಾದಿರಣ್ಣಾ. ಆಜ್ಞೆಯೊಳಡಗದ ಹೆಂಡತಿಗೆ ಗಂಡನಾದಂತೆ ಇದಕ್ಕಿನ್ನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?