Index   ವಚನ - 552    Search  
 
ಭಕ್ತಂಗೆ ಪೃಥ್ವಿಯಂಗವಾಗಿ, ಮಾಹೇಶ್ವರಂಗೆ ಅಪ್ಪುವಂಗವಾಗಿ, ಪ್ರಸಾದಿಗೆ ಅಗ್ನಿಯಂಗವಾಗಿ, ಪ್ರಾಣಲಿಂಗಿಗೆ ಪವನನಂಗವಾಗಿ, ಶರಣಂಗೆ ಆಕಾಶವಂಗವಾಗಿ, ಐಕ್ಯಂಗೆ ಮಹಾಬೆಳಗೆ ಅಂಗವಾದಲ್ಲಿ, ಪಂಚತತ್ವ ಕೂಡಿ ಒಂದರಲ್ಲಿ ಎಯ್ದುವಲ್ಲಿ, ಷಡುಸ್ಥಲ ರೂಪಾಯಿತ್ತು. ಆರು ವರ್ಣಕ್ಕೆ ಅಪ್ಪು ಅರಸಾದಂತೆ, ಏಕಛತ್ರ ಮಹಾರಾಜ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.