ಭಕ್ತಂಗೆ ಭಕ್ತಿಯ ಲಕ್ಷಣವೆಂತೆಂದಡೆ:
ಕಳ್ಳ ಹಾದರಿಗ ಹಾವಾಡಿಗ ಆರಾದಡೂ
ಶಿವಲಾಂಛನವ ತಾಳಿ ಬಂದಲ್ಲಿ, ಶಿವನೆಂದೇ ಪ್ರಮಾಣಿಸುವುದು.
ಮಾಡುವಾತನ ಭಕ್ತಿಯ ಲಕ್ಷಣ ವರ್ಮವನರಿದು,
ಮಾಡುವ ಸದ್ಭಕ್ತನ ಇರವೆಂತೆಂದಡೆ:
ಒರತೆಯ ಘಟದಲ್ಲಿ ತೋರುವ ಚಿತ್ರ, ಚಿತ್ರವಪ್ಪುದೆ ?
ಕತ್ತಲೆಯ ಮನೆಯಲ್ಲಿ ಒಪ್ಪುವ ಚಿತ್ತಾರದಂತೆ,
ಚಿತ್ತಾರದಲ್ಲಿ ಅಡಗಿದ ನಿಶ್ಚಯದ ಲೆಕ್ಕಣಿಕೆಯಂತೆ,
ಚಿತ್ತದೊಳಡಗಿದ ನಿಶ್ಚಯದಂತೆ ಹೀಗರಿದು ಮಾಡುವುದೇ ವರ್ಮಸ್ಥಲ,
ಸಮೂಹದಲ್ಲಿ ಮಾಡುವುದೇ ಭಕ್ತಸ್ಥಲ.
ಇಂತೀ ಉಭಯದಾವರ್ತವನರಿದಲ್ಲದೆ ಭಕ್ತನಲ್ಲ, ವಿರಕ್ತನಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaktaṅge bhaktiya lakṣaṇaventendaḍe:
Kaḷḷa hādariga hāvāḍiga ārādaḍū
śivalān̄chanava tāḷi bandalli, śivanendē pramāṇisuvudu.
Māḍuvātana bhaktiya lakṣaṇa varmavanaridu,
māḍuva sadbhaktana iraventendaḍe:
Orateya ghaṭadalli tōruva citra, citravappude?
Kattaleya maneyalli oppuva cittāradante,
cittāradalli aḍagida niścayada lekkaṇikeyante,
cittadoḷaḍagida niścayadante hīgaridu māḍuvudē varmasthala,
samūhadalli māḍuvudē bhaktasthala.
Intī ubhayadāvartavanaridallade bhaktanalla, viraktanalla,
niḥkaḷaṅka mallikārjunā.