ಭಕ್ತಂಗೆ ಭಕ್ತಸ್ಥಲ, ಮಹೇಶ್ವರಂಗೆ ಮಾಹೇಶ್ವರಸ್ಥಲ,
ಪ್ರಸಾದಿಗೆ ಪ್ರಸಾದಿಸ್ಥಲ, ಪ್ರಾಣಲಿಂಗಿಗೆ ಪ್ರಾಣಲಿಂಗಿಸ್ಥಲ,
ಶರಣಂಗೆ ಶರಣಸ್ಥಲ, ಐಕ್ಯಂಗೆ ಮಹದೈಕ್ಯಸ್ಥಲ.
ಇಂತೀ ಈರಾರ ಭೇದಮಿಶ್ರಂಗಳು ಕೂಡಿ,
ತತ್ವವೊಂದರಲ್ಲಿ ಎಯ್ದಿ,
ಆ ವಸ್ತುವಿಗೆ ಒಂದೆ ವಿಶ್ವಾಸದಲ್ಲಿ ಸಂಭವಿಸಿ ಲೇಪವಾಯಿತ್ತು.
ಇಂತೀ ಗುಣಸ್ಥಲ ಲೇಪ ಐಕ್ಯ.
ನಿಃಕಳಂಕ ಮಲ್ಲಿಕಾರ್ಜುನ ನಾಮವಡಗಿದ ನಿರ್ನಾಮಭೇದ.
Art
Manuscript
Music
Courtesy:
Transliteration
Bhaktaṅge bhaktasthala, mahēśvaraṅge māhēśvarasthala,
prasādige prasādisthala, prāṇaliṅgige prāṇaliṅgisthala,
śaraṇaṅge śaraṇasthala, aikyaṅge mahadaikyasthala.
Intī īrāra bhēdamiśraṅgaḷu kūḍi,
tatvavondaralli eydi,
ā vastuvige onde viśvāsadalli sambhavisi lēpavāyittu.
Intī guṇasthala lēpa aikya.
Niḥkaḷaṅka mallikārjuna nāmavaḍagida nirnāmabhēda.