Index   ವಚನ - 563    Search  
 
ಭಕ್ತನ ಭಕ್ತಸ್ಥಲದ ಮಹೇಶ್ವರನ ಭಾವ, ಧರೆ ಪಂಕಜಲದಂತೆ. ಮಹೇಶ್ವರನ ಮಹೇಶ್ವರನ ಪ್ರಸಾದಿಯ ಭಾವ, ತರುಗಂಧ ಅನಿಲದಂತೆ. ಪ್ರಸಾದಿಯ ಪ್ರಸಾದಿಯ ಪ್ರಾಣಲಿಂಗಿಯ ಭಾವ, ಮರೀಚಿಕಾಜಲದ ತೆರೆಯ ಹೊಳಹಿನ ಅರುಣನ ಕಿರಣ ಗ್ರಹಿಸಿಕೊಂಡಂತೆ. ಪ್ರಾಣಲಿಂಗಿಯ ಪ್ರಾಣಲಿಂಗಿಯ ಶರಣಸ್ಥಲದ ಭಾವ, ತಿಲ ತೈಲ ನೀರಿನಂತೆ. ಶರಣನ ಶರಣನ ಐಕ್ಯಸ್ಥಲದ ಭಾವ, ದರ್ಪಣದ ಬಿಂಬ ಬಿಂಬಿಸುವ ಉಭಯದೃಷ್ಟಿ ಏಕವಾದಂತೆ. ಐಕ್ಯನ ಮಹದೈಕ್ಯಭಾವ, ಮಿಂಚಿನ ಕುಡಿವೆಳಗಿನ ಸಂಚದ ಸಂಚಲದ ಸಂಚಾರ ಸಂಚಲಿಸುವ ಸರದಂತೆ. ಇಂತೀ ಸ್ಥಲ, ಭಾವಕ್ಕೆ ಭಾವ, ಜ್ಞಾನಕ್ಕೆ ಜ್ಞಾನ ವೇಧಿಸಿ ಭೇದಿಸುವಲ್ಲಿ, ದೃಕ್ಕು ದೃಶ್ಯಕ್ಕೆ ಒಡಲಿಲ್ಲದಿರಬೇಕು, ನಿಃಕಳಂಕ ಮಲ್ಲಿಕಾರ್ಜುನಾ.