ಭಕ್ತಿಯೆಂಬ ಪಾಶವ ಹೊತ್ತು
ಮಾಡುವ ಭಕ್ತನ ಸತ್ಯ ಹೇಗೆಂದಡೆ:
ಲಾಂಛನವ ಹೊತ್ತು ಜಂಗಮ ಮನೆಗೆ ಬಂದಡೆ,
ಮುಯ್ಯಾಂತು ಅಡಿಗೆರಗಿ ಸಡಗರಿಸಿ, ಮೃಡನೆಂದು ಪ್ರಮಾಣಿಸಿ,
ಮನದಲ್ಲಿ ಒಡಗೂಡಿ ಗುಡಿಕಟ್ಟಿ ಪುಳಕವೇರಿ, ಎರಡಿಲ್ಲದೆ ತ್ರಿವಿಧಕ್ಕೆ ಬಿಡಬೀಸಿ,
ಒಡೆಯಂಗೆ ಒಡವೆಯಂ ಕೊಟ್ಟು, ಹಡೆವೆಡೆಯೊಳಗಿರ್ಪ ದೃಢಚಿತ್ತಂಗೆ
ಬಿಡುವಿಲ್ಲದೆ ನಮೋ ನಮೋ [ಎಂಬೆ],
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaktiyemba pāśava hottu
māḍuva bhaktana satya hēgendaḍe:
Lān̄chanava hottu jaṅgama manege bandaḍe,
muyyāntu aḍigeragi saḍagarisi, mr̥ḍanendu pramāṇisi,
manadalli oḍagūḍi guḍikaṭṭi puḷakavēri, eraḍillade trividhakke biḍabīsi,
oḍeyaṅge oḍaveyaṁ koṭṭu, haḍeveḍeyoḷagirpa dr̥ḍhacittaṅge
biḍuvillade namō namō [embe],
niḥkaḷaṅka mallikārjunā.