Index   ವಚನ - 582    Search  
 
ಭಕ್ತಿಸೂತ್ರ ಬಸವಣ್ಣಂಗೆ, ಭಾವಸೂತ್ರ ಚೆನ್ನಬಸವಣ್ಣಂಗೆ, ಜ್ಞಾನಸೂತ್ರ ಪ್ರಭುದೇವಂಗೆ. ಇಂತೀ ಸ್ಥೂಲತನು ಬಸವಣ್ಣಂಗೆ, ಸೂಕ್ಷ್ಮ ತನು ಚೆನ್ನಬಸವಣ್ಣಂಗೆ, ಕಾರಣ ತನು ಪ್ರಭುದೇವಂಗೆ. ಕಾಯ ಬಸವಣ್ಣನಾಗಿ, ಜೀವ ಚೆನ್ನಬಸವಣ್ಣನಾಗಿ, ಉಭಯದರಿವು ಪ್ರಭುದೇವರಾಗಿ. ಇಂತೀ ತ್ರಿವಿಧ ಪ್ರಸಾದ ಎನಗೆ ನಿಂದು, ಎನ್ನ ಜನ್ಮವಾಸನೆ ಬಿಡದಿದೆ ನೋಡಾ. ಈ ವಾಸನೆ ನಿಃಕಳಂಕ ಮಲ್ಲಿಕಾರ್ಜುನ ನಷ್ಟವಾಗಿಯಲ್ಲದೆ, ಎನ್ನ ಭಾವ ನಷ್ಟವಿಲ್ಲ.