Index   ವಚನ - 585    Search  
 
ಭಕ್ತಿಸ್ಥಲ ಮಾಹೇಶ್ವರನ ನಿರ್ವೀಜ. ಆ ನಿರ್ವೀಜ, ಪ್ರಸಾದಿಯ ಪ್ರಣಮ. ಆ ಪ್ರಣಮ, ಪ್ರಾಣಲಿಂಗಿಯ ಎರಡಳಿದ ಅರಿವು. ಆ ಅರಿವು, ಶರಣನ ಪರಿಪೂರ್ಣಕಳೆ. ಆ ಕಳೆ, ನಿಃಪತಿಯಾದಲ್ಲಿ ಐಕ್ಯನ ನಿರವಯ. ಆ ನಿರವಯ ವಸ್ತು ಬೇರೊಂದೇಕೆ, ಕುರುಹುಗೊಂಡೆ ? ಅದು ನಿನ್ನದಲ್ಲ, ಎನ್ನ ಅಂಗಕ್ಕೋಸ್ಕರವಾಗಿ ಲಿಂಗವಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.