Index   ವಚನ - 590    Search  
 
ಭವಾರಣ್ಯದಲ್ಲಿ ಒಂದು ವನಚರ ಹುಟ್ಟಿತ್ತು. ಅದಕ್ಕೆ ಮೂರು ಮುಖ ತಲೆದೋರಿ, ಆರು ಕೊಂಬಿನ ಹಣ್ಣ ಅರಸುತ್ತಿದ್ದಿತ್ತು. ಆರು ಮೂರರೊಳಗಡಗಿದುದನರಿಯದೆ, ಮೂರು ಒಂದರೊಳಗಾದುದನರಿಯದೆ, ಹಲವು ಕೊಂಬೆಗೆ ಹಾರೈಸಿ, ಒಂದೂ ಹಣ್ಣ ಮೆಲಲರಿಯದೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ ಹೋಯಿತ್ತು