Index   ವಚನ - 592    Search  
 
ಭಾಳಾಂಬಕ ಬಲೆಗೆ ಸಿಲ್ಕಿದ, ಲೀಲಾಂಗ ಕಾಲಕ್ಕೊಳಗಾದ. ಪುಷ್ಪೋದ್ಭವ ಹಿಡಿಗಟ್ಟಿಗೀಡಾದ. ಇವರ ಮೂವರ ದೇವರೆಂದಾರಾಧಿಸಿದಡೆ, ಜೇನಮಡಕೆಯಲ್ಲಿ ಸಿಕ್ಕಿದ ನೊಣದಂತಾದಿರಯ್ಯಾ. ಅಂಟಿಗೆ ಸಿಕ್ಕಿದ ವಿಹಂಗನಂತಾದಿರಣ್ಣಾ. ಅಂಥವರ ಕಂಡು ಎನಗಂಜಿಕೆಯಾಯಿತ್ತಯ್ಯಾ. ಇವರ ಮೂವರ ಬಿಡಲಾರದೆ, ಭಾಳಾಂಬಕನ ಭಾಳದಲ್ಲಿ ಧರಿಸಿದೆ. ವಿಷ್ಣುವಿನ ಅಕ್ಷಿಯಲ್ಲಿ ಧರಿಸಿದೆ, ಬ್ರಹ್ಮನ ಬಾಯಲ್ಲಿ ಧರಿಸಿದೆ. ಇವರ ಮೂವರ ಕೊಂದ ಭೇದ. ಲಲಾಟದಲ್ಲಿದ್ದವನ ತಲೆಯ ಹೊಯ್ದೆ. ಅಕ್ಷಿಯಲ್ಲಿದ್ದವನ ಕುಕ್ಷಿಯಂ ಕುಕ್ಕಿದೆ. ಬಾಯಲ್ಲಿದ್ದವನ ಬಸುರ ಒಡೆಯ ಹೊಯ್ದೆ. ಹೊಯ್ಯಲಾಗಿ ಅವರು ಬದುಕಿದರು, ನಾ ಸತ್ತೆ. ಸತ್ತವನಿಗೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ ?