ಭೂತಹಿತವುಳ್ಳನ್ನಕ್ಕ ಇಷ್ಟಲಿಂಗಪೂಜೆ.
ಸರ್ವರ ಚೇತನ ಭಾವವನರಿವನ್ನಕ್ಕ ಭಾವಲಿಂಗಪೂಜೆ.
ಸರ್ವಜೀವಂಗಳಲ್ಲಿ ದಯವುಳ್ಳನ್ನಕ್ಕ ಪ್ರಾಣಲಿಂಗಪೂಜೆ.
ಇಂತೀ ತ್ರಿವಿಧಭೇದಂಗಳಲ್ಲಿ ತ್ರಿವಿಧಾತ್ಮಭರಿತನಾಗಿ,
ಕ್ರೀಯಲ್ಲಿ ತ್ರಿವಿಧ, ಭಾವದಲ್ಲಿ ತ್ರಿವಿಧ, ಜ್ಞಾನದಲ್ಲಿ ತ್ರಿವಿಧ.
ತನ್ನ ತ್ರಿವಿಧವ ತಾನರಿದು, ಅನ್ಯಭಿನ್ನವಿಲ್ಲದೆ ನಿಂದುದು,
ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhūtahitavuḷḷannakka iṣṭaliṅgapūje.
Sarvara cētana bhāvavanarivannakka bhāvaliṅgapūje.
Sarvajīvaṅgaḷalli dayavuḷḷannakka prāṇaliṅgapūje.
Intī trividhabhēdaṅgaḷalli trividhātmabharitanāgi,
krīyalli trividha, bhāvadalli trividha, jñānadalli trividha.
Tanna trividhava tānaridu, an'yabhinnavillade nindudu,
prāṇaliṅgasambandha, niḥkaḷaṅka mallikārjunā.