Index   ವಚನ - 598    Search  
 
ಭೃತ್ಯನಾದಲ್ಲಿ ಕರ್ತೃವಿನ ಕೈಯ ಊಳಿಗವ ಕೊಂಬ ಭಕ್ತರ ಕಂಡು ನಾಚಿತ್ತೆನ್ನ ಮನ. ಆಳುವ ಅರಸಿನ ಕೈಯಲ್ಲಿ ಊಳಿಗವ ಕೊಂಬಂತೆ, ತೊತ್ತು ಒಡತಿಯ ಕೈಯಲ್ಲಿ ಭೃತ್ಯತ್ವವ ಮಾಡಿಸಿಕೊಂಬಂತೆ, ಮೊದಲಿಗೆ ಮೋಸ ಲಾಭವನರಸಲುಂಟೆ? ಅರ್ತಿಗಾರರೆಲ್ಲಕ್ಕೆ ನಿಶ್ಚಯದ ಭಕ್ತಿಯುಂಟೆ? ಹೊತ್ತುಹೋಕರ ಭಕ್ತರೆಂದಡೆ, ಒಪ್ಪುವರೆ ನಿಚ್ಚಟಶರಣರು? ಅಚ್ಚು ಮುರಿದ ಹಾರಕ್ಕೆ ಎತ್ತಿನ ಹಂಗೇಕೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.