ಭೃತ್ಯರೂಪೊಂದು ಭಕ್ತಿಸ್ಥಲ, ಕರ್ತೃರೂಪೊಂದು ವಸ್ತು.
ಈ ಉಭಯ ಜಗದ ಹಾಹೆ ನಡೆಯಬೇಕಾದಲ್ಲಿ,
ಮೂರು ಭಕ್ತಿಸ್ಥಲವಾಯಿತ್ತು. ಮೂರು ಕರ್ತೃಸ್ಥಲವಾಯಿತ್ತು.
ಭಕ್ತ ಮಾಹೇಶ್ವರ ಪ್ರಸಾದಿ, ಈ ತ್ರಿವಿಧಭಾವ ಭಕ್ತಿರೂಪು.
ಪ್ರಾಣಲಿಂಗಿ ಶರಣ ಐಕ್ಯ, ಈ ತ್ರಿವಿಧ [ಭಾವ] ಕರ್ತೃಸ್ವರೂಪು.
ಇಂತೀ ಉಭಯಭೇದದಲ್ಲಿ, ವಸ್ತು ಮರ್ತ್ಯಕ್ಕೆ ಬಂದು,
ಮುಂದೆ ಆಶ್ರಯವ ಕಟ್ಟಿದ ಕಾರಣ,
ಭಕ್ತಿಗೆ ಬಸವಣ್ಣನಾಗಿ, ಆ ಭಕ್ತಿಯನೊಪ್ಪುಗೊಂಬುದಕ್ಕೆ
ವಸ್ತು ಪ್ರಭುರೂಪಾಗಿ ಬಂದ ಕಾರಣದಲ್ಲಿ,
ಉಭಯಸ್ಥಲ ಗೋಚರಿಸದೆಂದು ಷಟ್ಸ್ಥಲವಾಯಿತ್ತು.
ಆ ಸ್ಥಲದ ನಾಮ ರೂಪಿನಲ್ಲಿ ನಾನಾಸ್ಥಲ ಒಡಲಾಯಿತ್ತು.
ಪೂರ್ವಗತಿಯಾದಲ್ಲಿ ಸ್ಥಲ, ಉತ್ತರಗತಿಯಾದಲ್ಲಿ ನಿಃಸ್ಥಲ
ಉಭಯನಾಮರೂಪು ಲೇಪವಾದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನ ನಿರ್ಲೇಪವಾದನು.
Art
Manuscript
Music Courtesy:
Video
TransliterationBhr̥tyarūpondu bhaktisthala, kartr̥rūpondu vastu.
Ī ubhaya jagada hāhe naḍeyabēkādalli,
mūru bhaktisthalavāyittu. Mūru kartr̥sthalavāyittu.
Bhakta māhēśvara prasādi, ī trividhabhāva bhaktirūpu.
Prāṇaliṅgi śaraṇa aikya, ī trividha [bhāva] kartr̥svarūpu.
Intī ubhayabhēdadalli, vastu martyakke bandu,
munde āśrayava kaṭṭida kāraṇa,
Bhaktige basavaṇṇanāgi, ā bhaktiyanoppugombudakke
vastu prabhurūpāgi banda kāraṇadalli,
ubhayasthala gōcarisadendu ṣaṭsthalavāyittu.
Ā sthalada nāma rūpinalli nānāsthala oḍalāyittu.
Pūrvagatiyādalli sthala, uttaragatiyādalli niḥsthala
ubhayanāmarūpu lēpavādalli,
niḥkaḷaṅka mallikārjuna nirlēpavādanu.