Index   ವಚನ - 604    Search  
 
ಮಂಜಿನ ರಂಜನೆಯ ನೀರಿಗೆ ತಟಾಕ ತುಂಬಿದುದುಂಟೆ ? ಮರೀಚಿಕಾಜಲದ ತೆರೆಯ ತಳ್ಳಿ ನೀರ ಕೊಂಡೆಹೆನೆಂಬವರುಂಟೆ ? ಅಂಗಸ್ಥಲವಾರು, ಉಭಯಲಿಂಗಸ್ಥಲ ಮೂರು. ಏಕತತ್ವ ಇಪ್ಪತ್ತೈದು ಪೂರ್ವ ಉಭಯವನೆಯ್ದಿ, ಉತ್ತರಕ್ಕೆ ನೂರೊಂದೆಂದಲ್ಲಿ, ಆ ಕಲ್ಪಿತವ ಕಂಡು, ಅಕಲ್ಪಿತನಾಗಬೇಕು. ಅದು ಸ್ಥಲಭರಿತ ನಿರ್ದೇಹ, ಐಕ್ಯಸ್ಥಲ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.