Index   ವಚನ - 621    Search  
 
ಮನಸ್ಸು ಏತರಿಂದ ಅರಿವುದು ಲಿಂಗವನು ? ಬುದ್ಧಿ ಏತರಿಂದ ಅರಿವುದು ಮನಸ್ಸನು ? ಚಿತ್ತ ಏತರಿಂದ ಅರಿವುದು ಬುದ್ಧಿಯ ? ಅಹಂಕಾರ ಏತರಿಂದ ಅರಿವುದು ಚಿತ್ತವನು ? ಈ ಚತುಷ್ಟಯವ ಏತರಿಂದ ಅರಿವೆ ? ಒಂದಕ್ಕೊಂದು ಹಂದಿಲ್ಲದೆ ಕಾಣೆ. ಒಂದನೆಣಿಸಿ ಎಣಿಕೆಗೆ ತುಂಬಿದ ಮತ್ತೆ, ಮತ್ತೊಂದೆಂದಲ್ಲದೆ ಸಂಗವಿಲ್ಲ ಲೆಕ್ಕ. ಇದರಂದದ ತೆರ ಲಿಂಗ. ಇದ ಸಂಗಂಗೊಳಿಸು, ಭಂಗಿತನಾಗಲಾರೆ, ನಿಃಕಳಂಕ ಮಲ್ಲಿಕಾರ್ಜುನಾ.