ಮಹಾಮಲೆಯಲ್ಲಿ ಕೊಲುವ ವ್ಯಾಘ್ರನ ನಾಲಗೆಯ ತುದಿಯಲ್ಲಿ,
ಒಂದು ಮೊಲ ಹುಟ್ಟಿತ್ತು.
ಆ ಮೊಲಕ್ಕೆ ಮೂರು ಕಾಲು, ತಲೆಯಾರು, ಬಾಯಿ ಐದು.
ಒಂದು ಬಾಯಿ ಎಲ್ಲಿ ಅಡಗಿತ್ತೆಂದರಿಯೆ.
ಆರು ತಲೆಗೆ ಒಂದು ಕಣ್ಣು, ಅರೆ ನಾಲಗೆ, ಕಿತ್ತಿ ಹತ್ತಾಗಿ ಹರಿದಾಡುತ್ತದೆ.
ಎಸುವರ ಕಾಣೆ, ಬಲೆಗೊಳಗಾಗದು.
ಆ ಶವಕವ ಹೊಸ ಕೋಳಿ ನುಂಗಿತ್ತು, ನುಂಗಿದ ಕೋಳಿಯ ಶರಣ ನುಂಗಿದ.
ಆ ಶರಣಸನ್ಮತವಾಗಿ ಪ್ರಣವ ನುಂಗಿತ್ತು.
ಆ ನುಂಗಿದ ಪ್ರಣವವ ಅದರಂಗವನರಿದಡೆ, ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ.