ಮಾಟಕೂಟವೆಂಬ ಹೊಲದಲ್ಲಿ, ಪಾಪರುಣ್ಯವೆಂಬ ಬೀಜವ ಬಿತ್ತೆ,
ತಂಗಾಲಕ್ಕೆ ಬೆಳೆದು, ಮಳೆಗಾಲಕ್ಕೆ ತಗ್ಗಿ,
ಹೊಲದ ಓವರಿಯಲ್ಲಿ ಜಲಬಿದ್ದು ಹೋಯಿತ್ತು.
ಮತ್ತೆ ಹೊಲದ ಹೊಲಬಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Māṭakūṭavemba holadalli, pāparuṇyavemba bījava bitte,
taṅgālakke beḷedu, maḷegālakke taggi,
holada ōvariyalli jalabiddu hōyittu.
Matte holada holabilla, niḥkaḷaṅka mallikārjunā.