Index   ವಚನ - 635    Search  
 
ಮಾಡಿ ಮರುಗುವ, ನೀಡಿ ನಿಜವಿಲ್ಲದೆ ಇಹ, ಕೊಟ್ಟು ಹೊಟ್ಟೆ ರೋಗವಿಕ್ಕುವ ಘಟ್ಟುವಿನ ಇರವು, ಬಟ್ಟೆಬಡಿದುಂಬ ಹೊಟ್ಟೆಹೊರಕ ಮಾಡುವ ಭಕ್ತಿ. ಮೆಟ್ಟುಗುಳಿಯಲ್ಲಿ ನಿಂದು ತುತ್ತ ನುಂಗಿದಂತೆ, ನಿಃಕಳಂಕ ಮಲ್ಲಿಕಾರ್ಜುನಾ.