ಮಾತಿನಲ್ಲಿ ಗೆಲ್ಲಸೋಲದಲ್ಲಿ ಅಜಾತನನರಿಯಬಾರದು.
ಶಾಸ್ತ್ರದ ಗೀತೆಯ ಗುಣದಲ್ಲಿ,
ಪ್ರಖ್ಯಾತನಾದನ ನೀತಿಯ ವೇಷವನರಿಯಬಾರದು.
ಉಂಟೆಂಬವನಲ್ಲಿ, ಇಲ್ಲ ಎನಲೇಕೆ ?
ಇಲ್ಲ ಎಂಬವನಲ್ಲಿ, ಉಂಟು ಎನಲೇಕೆ ?
ಈ ಉಭಯದ ಕಂಟಕವನೀಂಟಿಯಲ್ಲದೆ, ನಿಜವಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music Courtesy:
Video
TransliterationMātinalli gellasōladalli ajātananariyabāradu.
Śāstrada gīteya guṇadalli,
prakhyātanādana nītiya vēṣavanariyabāradu.
Uṇṭembavanalli, illa enalēke?
Illa embavanalli, uṇṭu enalēke?
Ī ubhayada kaṇṭakavanīṇṭiyallade, nijavalla,
niḥkaḷaṅka mallikārjunā.