ಮಾತಿಗೆ ಮಾತು ಕೊಟ್ಟು, ನೀತಿ ನಿರ್ಣಯವನರಿಯದೆ,
ಜ್ಞಾತೃ ಜ್ಞಾನ ಜ್ಞೇಯವೆಂಬ ಭ್ರಾಂತಿನ ಕುಡಿಕೆಯಲ್ಲಿ ಸಿಕ್ಕಿ,
ಕೂಗುತ್ತಿದ್ದವರ ಕಂಡು, ಅದೇತಕ್ಕೆ ಬಾತೆ ಎಂದೆ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Mātige mātu koṭṭu, nīti nirṇayavanariyade,
jñātr̥ jñāna jñēyavemba bhrāntina kuḍikeyalli sikki,
kūguttiddavara kaṇḍu, adētakke bāte ende,
niḥkaḷaṅka mallikārjunā.