ಮಾತಿನಲ್ಲಿ ನಿರ್ವಾಣ, ಆತ್ಮನಲ್ಲಿ ಘಾತಕ, ಕೂಸು ಹೇತು ಕಲಿಸುವಂತೆ,
ತ್ರಿವಿಧದ ಆಸೆಗೆ ಸಿಕ್ಕಿ ಸಾವ ತೂತರಿಗೆಲ್ಲಿಯದೊ ಲಿಂಗ ?
ಅದೇತರ ನಿರ್ವಾಣ ?
ಏತದ ಕೂನಿಯಂತೆ, ರಾಟಾಳದಂತೆ,
ಭವಪಾಶದಲ್ಲಿ ಬಿದ್ದು ಘಾಸಿಯಾದ ಮತ್ತೆ ನಿನಗಿನ್ನೇತರ ಭಾಷೆಯೊ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Mātinalli nirvāṇa, ātmanalli ghātaka, kūsu hētu kalisuvante,
trividhada āsege sikki sāva tūtarigelliyado liṅga?
Adētara nirvāṇa?
Ētada kūniyante, rāṭāḷadante,
bhavapāśadalli biddu ghāsiyāda matte ninaginnētara bhāṣeyo,
niḥkaḷaṅka mallikārjunā?