Index   ವಚನ - 651    Search  
 
ಮುಚ್ಚಿ ಕಾಬುದು ಸ್ವಪ್ನದ ಇರವು, ತೆರೆದು ಕಾಬುದು ಜಾಗ್ರದ ಇರವು. ಸುಷುಪ್ತಿಯಲ್ಲಿ ಕಾಬುದು ಚಿತ್ತುವಿನ ಇರವು. ಚಿತ್ತು ನಾಮನಷ್ಟವಾದ ಮತ್ತೆ ನಿಶ್ಚಯದಿರವು, ನಿಃಕಳಂಕ ಮಲ್ಲಿಕಾರ್ಜುನಾ.