Index   ವಚನ - 662    Search  
 
ಯೋನಿಯಲ್ಲಿ ಹುಟ್ಟಿದ ಸಕಲಜೀವಂಗಳೆಲ್ಲ, ಮತ್ತೆ ಯೋನಿಯ ಬಯಕೆ, ಮತ್ತಾ ಯೋನಿಗಾಗಿ ಜನನ, ಯೋನಿಗಾಗಿ ಮರಣ. ಇಂತಿವ ತಿಳಿದ ಮತ್ತೆ ತಾವು ಅದರಲ್ಲಿ ಅಳಿವುತ್ತ ಮತ್ತೆ ಜ್ಞಾನವೆ ? ಮತ್ತೆ ಶಿವಧ್ಯಾನವೆ? ಮತ್ತೆ ನಾನಾ ವ್ರತ ನೇಮವೆ ? ಶುದ್ಧ ಭಾವವೆ ? ಎಲ್ಲೆಲ್ಲಿ ನೋಡಿದಡೆ ಕಟಿಹದ ಬಿದಿರಿನಂತೆ, ತೊಟ್ಟು ಬಿಟ್ಟ ಹಣ್ಣಿನಂತೆ, ದ್ರವ ತಟ್ಟಾರಿದ ಫಲದಂತೆ, ನಿಶ್ಚಯವಾಗಿರ್ಪವರಲ್ಲಿಯಲ್ಲದೆ, ನಿಃಕಳಂಕ ಮಲ್ಲಿಕಾರ್ಜುನನು ಮತ್ತೆಲ್ಲಿಯೂ ಇಲ್ಲ.